Home

ಕನ್ನಡ ರಾಜ್ಯೋತ್ಸವ ಶುಭಾಶಯಗಳು! ಕನ್ನಡ ತಾಯಿಗೆ ನಮನ!
ನಮ್ಮ ಮನಸ್ಸಿನಲ್ಲಿ ನಮ್ಮ ಸುಂದರ ಭಾಷೆ ಜ್ಹೆಂಕರಿಸಲು ಪ್ರೇರೇಪಿಸಲು ಬರುವ ಈ ನಾಡ ಹಬ್ಬಕ್ಕೆ ಮನಸ್ಸು ತುಂಬಿಬರುತ್ತದೆ.
ತಡವಾದರೂ ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.IT Kannadiga - ಸಂಕೇತದ ದೃಶ್ಯ
ನಮ್ಮ ಕನ್ನಡ ನಾಡು ನುಡಿಯ ರಕ್ಷಣೆಗಾಗಿ ನಾವು ಎಂದೆಂದೂ ಕಂಕಣಬದ್ಧರಾಗಿರೋಣ.
ಸಿರಿಗನ್ನಡಂ ಗೆಲ್ಗೆ – ಸಿರಿಗನ್ನಡಂ ಬಾಳ್ಗೆ

ಕನ್ನಡಿಗರ ಅದರಲ್ಲೂ IT ಕನ್ನಡಿಗರ ನಡುವಿನ ಪ್ರಮುಖ ಸಂಪರ್ಕ ಕೊಂಡಿ ಮತ್ತು ಪ್ರಮುಖ ಮಾಧ್ಯಮವಾಗಿರುವ ಅಂತರ್ಜಾಲದ ಮುಖಾಂತರ ಬೆಂಗಳೂರು ಹಾಗು ಕರ್ನಾಟಕದ ವಿವಿಧ ದಿಕ್ಕುಗಳಿಂದ ಸಿಗುವ ಸುದ್ಧಿಗಳನ್ನು ಜೊತೆಗೆ ಕನ್ನಡಿಗರನ್ನು ಜಾಗೃತಗೊಳಿಸುವ ಲೇಖನಗಳನ್ನು ಸಮರ್ಪಕವಾಗಿ ತಲುಪಿಸಬೇಕೆಂಬ ಉದ್ದೇಶದೊಂದಿಗೆ www.itkannadiga.com ಎಂಬ ತಾಣವನ್ನು ಸ್ಥಾಪಿಸಿದ್ದೇವೆ.
www.itkannadiga.com ಸತ್ಯ ಸುದ್ಧಿಗಳ ಅನ್ವೇಷಣೆಯತ್ತ ಒಂದು ಪುಟ್ಟ ಪ್ರಯತ್ನ.
Internet/Website ಸಮಾಜವನ್ನು ಆವರಿಸಿಕೊಂಡಿರುವ ಅತ್ಯಂತ ಪ್ರಭಾವೀ ಸಾಧನ. ಹೀಗಾಗಿ ಇದನ್ನ ಆಯ್ಕೆ ಮಾಡಿಕೊಂಡಿದ್ದೀವಿ.

ಇವತ್ತಿನ ಪರಿಸ್ಥಿತಿಯಲ್ಲಿ ಕನ್ನಡಕ್ಕೆ, ಕನ್ನಡಿಗರಿಗೆ ಆಗುತ್ತಿರುವ ತೊಂದರೆಗಳು ಹಾಗು ಅದಕ್ಕೆ ಪರಿಹಾರಗಳು www.itkannadiga.comನ ಕನ್ನಡಿಯಲ್ಲಿ ಪ್ರತಿಬಿಂಬಗೊಳ್ಳಬೇಕು ಅನ್ನೋದೇ ನಮ್ಮ ಆಸೆ.
ನಾನು ಸಮಸ್ತ ಕನ್ನಡಿಗರಲ್ಲಿ ಕೇಳಿಕೊಳ್ಳುವುದೇನೆಂದರೆ, ನಾವು ಕನ್ನಡಿಗರು ಮತ್ತು ನಮ್ಮ ಕನ್ನಡ ಭಾಷೆ ಯಾವುದಕ್ಕಿಂತ ಕಡಿಮೆಯಿಲ್ಲ. ನಾವು ನಮ್ಮ ಭಾಷೆಯನ್ನ ಗೌರವಿಸೋಣ; ಪ್ರೀತಿಸೋಣ. ಹಾಗಂತ ಇತರ ಭಾಷೆಗಳನ್ನ ದ್ವೇಷಿಸಿ ಅಂತ ನಾನು ಹೇಳುತ್ತಿಲ್ಲ , ನಮ್ಮ ಭಾಷೆ ನಮಗೆ ತಾಯಿ ಇದ್ದಂತೆ, ಅಂದರೆ ತಾಯಿಯ ಗೌರವ ಕೊಟ್ಟು ಕಾಪಾಡೋಣ.
ನಿಮ್ಮೆಲ್ಲರ ಪ್ರೀತಿ, ಅಭಿಮಾನ, ನಂಬಿಕೆ, ಭರವಸೆಗಳೇ ನಮ್ಮ ಸಾಧನೆಗೆ ಉತ್ತೇಜನ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
“ಕನ್ನಡ ಅಳಿಯುತ್ತಿದೆ, ಅದನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ” ಎಂಬ ರಾಜಕಾರಣಿಗಳ ಹಾಗು ನವೆಂಬರ್ ನಾಯಕರ ಬಾಯಲ್ಲಿ ಸವೆದುಹೋದ ಸಲಹೆಯನ್ನು ನಮ್ಮ ವೆಬ್ ಸೈಟ್ ಸರ್ವಥಾ ನೀಡಬಾರದು ಅಂದ್ಕೊಂಡಿದ್ವಿ.
ಇದಕ್ಕೆ ಕಾರಣವಿದೆ. ಅಳಿಯುತ್ತಿರುವ ಕನ್ನಡವನ್ನು ಉಳಿಸಿ ಎಂದು ಯಾರು ಕೂಡ ಹೋರಾಟ ನಡೆಸಬೇಕಾಗಿಲ್ಲ. ಅದು ಉಳಿಯುತ್ತಿದೆ. ಸುಭದ್ರವಾಗಿ ಉಳಿಯುತ್ತಿದೆ. ನಮ್ಮ ನಿಮ್ಮೆಲ್ಲರ ಮನೆ-ಮನಗಳಲ್ಲಿ ಸುರಕ್ಷಿತವಾಗಿದೆ. ವಿಶೇಷವಾಗಿ ಬೆಂಗಳೂರಿನ ಮೋಲೆ ಮೋಲೆಯಲ್ಲಿ ಅದು ಭದ್ರವಾಗಿದೆ. ಅದನ್ನು ಕಾಪಾಡಲಾಗುತ್ತಿದೆ ಅನ್ನುವ ಭರವಸೆಯಿತ್ತು.

ಆದರೆ, 3 ನವೆಂಬರ್ ನ BangaloreMirror ನಲ್ಲಿ ಪ್ರಕಟವಾದ ಲೇಖನ ಸ್ವಲ್ಪ ಚಿಂತೆಗೀಡುಮಾಡಿದೆ (For the love of Kannada, a group is trying to make their fellow students from outside the state fall for the language). ಆ ಲೇಖನ ಹೀಗಿದೆ -> “we are not about fighting for Kannada. We are about getting students who are non-Kannadigas to appreciate the language and understand its fabric. We are looking to reintroduce Kannada in people’s daily lives”. ಅವರ ಪ್ರಕಾರ ಕಾಲೇಜ್ ಕ್ಯಾಂಪಸ್ ಗಳಿಂದ ಕನ್ನಡ ಮಾಯವಾಗಿದೆ. ಇನ್ನೂ ಮುಂದೆ ಹೋಗುತ್ತ ಅವರು ಹೇಳುವುದೇನೆಂದರೆ “A Kannada speaking person is treated like a second rate citizen. Even Kannadigas speak English more than they do Kannada. We are trying to change that attitude by introducing them to all that is unique and beautiful about the language” – ಆ ಮಕ್ಕಳಿಗಿರೋ ಕಾಳಜಿ ನಮ್ಮಲ್ಲಿ ಕಾಣುತ್ತಿಲ್ಲ. ಆ ಕಾಳಜಿಯನ್ನ ಬಡಿದೆಬ್ಬಿಸುವುದೇ ‘www.itkannadiga.com’ ನ ಧ್ಯೇಯ.

ಕನ್ನಡಕ್ಕೆ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು..ಅಂತಾ ಕವಿ ಮಹಾನುಭಾವರು ಹೇಳಿ ಹೋದರು. ಈಗ ಕನ್ನಡಕ್ಕೆ ಕೈ ಎತ್ತಿದರೆ ‘linguistic chauvinist’ ಅಂತಾ ಹಣೆಪಟ್ಟಿ ಕಟ್ಟುತ್ತಾರೆ. ಆದರೆ ನಮಗಂತೂ ಮಡಿವಂತಿಕೆಯ ಯಾವುದೇ ಚೌಕಟ್ಟಿಲ್ಲ.

ಕನ್ನಡ ನಾಡಿನ ಅನೇಕ ಊರುಗಳಲ್ಲಿ ಜನಿಸಿರುವ ನಾವು, ಅವುಡುಗಚ್ಚಿ ಓದಿ, ಇಂಜಿನಿಯರ್ ಅಥವಾ ಇತರೆ ಡಿಗ್ರಿಗಳನ್ನ ಮುಗಿಸಿದ್ದೀವಿ. ನಂತರ ಒಂದು ಸಣ್ಣ ಕೆಲಸ ಸಿಕ್ಕರೆ ಸಾಕು ಎಂದು ಆರಂಭಿಸಿ ಸಾಫ್ಟ್ ವೇರ್ ಇಂಜಿನಿಯರ್ ಗಳಾಗಿ ಯಶಸ್ವಿಯಾಗಿ, ದೇಶ ವಿದೇಶ ಸುತ್ತಿದ್ದು, ನಮ್ಮ ಜೀವನದ ಅಕೌಂಟಿಗೆ ಹತ್ತಾರು ಅನುಭವ ಜಮೆ ಮಾಡಿಕೊಂಡಿದ್ದೀವಿ.
ಈ ಸುಧೀರ್ಘ ಹಾದಿಯಲ್ಲಿ ನೋವಿದೆ, ನಲಿವಿದೆ.
ಯಶಸ್ಸು ಆತ್ಮವಿಶ್ವಾಸವನ್ನು ಹುಟ್ಟಿಸಿದೆ.
ವಾಸ್ತವದ ಸವಾಲುಗಳಿಗೆ ಮುಖಾಮುಖಿಯಾಗುತ್ತಲೇ ಕನ್ನಡ ಜನಪರವಾಗಿ ಬದುಕಲು ಹೊರಡಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ.
ಸದ್ಯದ ಸ್ಥಿತಿಯಲ್ಲಿ ಭರವಸೆ ಹುಟ್ಟಿಸುವ ರಾಜ್ಯದ ಯುವ ಪ್ರಜೆಗಳಲ್ಲಿ IT ಜನತೆ ಕೂಡ ಸೇರಿದ್ದೀವಿ.
ನಮ್ಮ ಜನಗಳಿಗೆ ಏನಾದರೂ ಮಾಡಬೇಕು ಎಂಬ ಮನಸ್ಸೇ ಕನ್ನಡ ಸೇವೆಯ ಹಾದಿಗೆ ಎಳೆದು ತಂದಿದೆ.

ನಿಮಗೆಲ್ಲ ಗೊತ್ತಿರುವಂತೆ ನಮ್ಮ IT ಕಂಪನಿಗಳ ವ್ಯವಸ್ಥೆಯಲ್ಲಿ ಕನ್ನಡಿಗರಿಗೆ ಏನೋ ಕೊರತೆ ಇದೇ ಎಂಬ ಆಪಾದನೆಯಿದೆ. ವ್ಯವಸ್ಥೆ ಸರಿಪಡಿಸಲು ಯಾರೂ ಮುಂದೆ ಬರುತ್ತಿಲ್ಲ.
ಆದರೆ ನಮ್ಮ ರಾಜ್ಯ, ಜಿಲ್ಲೆ, ಊರಿನ ಜನರೇಕೆ ವಂಚಿತರಾಗಬೇಕು? ಈ ದಿಸೆಯಲ್ಲಿ ಬರೀ ಮಾತಾಡುವ ಬದಲು ನಾವೇನು ಮಾಡಬಹುದೆಂದು ಯೋಚಿಸಿ, www.itkannadiga.com ವೆಬ್ ಸೈಟ್ ಅನ್ನು ಕಾರ್ಯರೂಪಕ್ಕೆ ತರುವ ನಿರ್ಧಾರ ತೆಗೆದುಕೊಂಡಿದ್ದೇವೆ.
ಈ ವೆಬ್ ಸೈಟ್ ತರಲು ಖಾಸಗಿ ಅಥವಾ ವೈಯುಕ್ತಿಕ ವಿಚಾರಗಳೇನು ಇಲ್ಲ. ಒಂದು ನಿರ್ದಿಷ್ಟ ಉದ್ದೇಶವಿದೆ.

ಪ್ರತಿಯೊಬ್ಬ ಓದುಗನಿಗೂ ಮನಸ್ಪೂರ್ವಕವಾಗಿ ಅಭಿನಂದಿಸುತ್ತೇನೆ.
www.itkannadiga.comಗೆ ನೀವೇ ಸ್ಫೂರ್ತಿ. ನಮ್ಮೆಲ್ಲ ಕಾರ್ಯಕ್ರಮಗಳಿಗೆ ನಿಮ್ಮ ಬೆಂಬಲವಿರಲಿ.

ನೀವು ಇಲ್ಲಿ ಗಮನಿಸಿರುತ್ತೀರಿ, ಈ ಮುನ್ನುಡಿಯಲ್ಲಿ ಹಲವು ಕಡೆ ‘ನೀವು’ ಎಂದು ಬಳಸಿದ್ದೀನಿ. ನೀವು ಎಂದರೆ ಓದುಗರು.
ಈ ವೆಬ್ ಸೈಟ್ ನಿಮಗೆ ಅಂದರೆ ಓದುಗರಿಗಾಗಿ. ನೀವು ಎಂದು ಸಂಭೋದಿಸುವಾಗ ‘ನಿಮ್ಮ ಜೊತೆ’ personally ಮಾತಾಡುತ್ತಿದ್ದೇವೆ.
ನೀವು ಈ ವೆಬ್ ಸೈಟ್ ಜತೆ personally connect ಆದರೆ ಮಾತ್ರ ನಮ್ಮ ಉದ್ದೇಶ ಸಾರ್ಥಕ.

ಅಲ್ಲದೇ ನಮ್ಮ ಕನ್ನಡ ಪ್ರೇಮವನ್ನ ಬರೀ ನವೆಂಬರ್ ಗೆ ಸೀಮಿತವಾಗಿಡದೆ ಏನಾದರೊಂದು ಕಾರ್ಯಕ್ರಮ ನಡೆಯುತ್ತಲೇ ಇರಬೇಕು.
ಹಾಗೆಯೇ ಕೆಳ ನಮೂದಿಸಿದ ಕೆಲವು ಸಲಹೆಗಳೊಂದಿಗೆ ಕನ್ನಡಮ್ಮನ ಸೇವೆ ಮುಂದುವರಿಸೋಣ.

೧. ಪ್ರತೀ ಕನ್ನಡಿಗನ ಮಕ್ಕಳೇ ಮೊದಲು ಕನ್ನಡ ಕಲಿಯಲಿ.
೨. ರಾಜ್ಯೋತ್ಸವಕ್ಕೆ ಬಂದ ನೂರಾರು SMS ಅಲ್ಲಿ ಕಣ್ ಸೆಳೆದ to the point ಸಂದೇಶ ಇದ್ದ ಒಂದು SMS.ನೀವು ಕನ್ನಡಿಗರಾ? ಹಾಗಿದ್ರೆ ಮುಚ್ಕೊಂಡು ಮಾಲ್, ಮಲ್ಟಿಪ್ಲೆಕ್ಸ್, ಬ್ಯಾಂಕು, ಎಟಿಎಮ್, ಐವಿಆರ್ ಹೀಗೆ ಎಲ್ಲ ಕಡೆ ಕನ್ನಡ ಬಳಸಿ. ಕನ್ನಡ ಉಳಿಸೋಕೆ ಅಷ್ಟು ಸಾಕು! ಕನ್ನಡ ನಾಡಹಬ್ಬದ ಸವಿ ಹಾರೈಕೆಗಳು.
೩. ಕನ್ನಡ ದಿನಪತ್ರಿಕೆ, ವಾರಪತ್ರಿಕೆ, ಕನ್ನಡ ಪುಸ್ತಕ ಖರೀದಿಸಿ ಓದಿ. itkannadiga.com ನ ಇನ್ನೊಂದು ಉದ್ದೇಶ ಕೂಡ ಹೆಚ್ಚು ಕನ್ನಡ ಸಾಹಿತ್ಯ ಮತ್ತು ಇತರೆ ಸಾಹಿತ್ಯದ ಸೊಗಡನ್ನು ಕಲೆ ಹಾಕಿ ಕರ್ನಾಟಕದ ಜನರಲ್ಲಿ ಓದುವ ಕಿಚ್ಚು ಹಚ್ಚಿಸುವುದು. ಕರ್ನಾಟಕದ ಜಾಗತಿಕ ಕಲೆಗಳನ್ನು ಜನರಿಗೆ ತಲುಪಿಸುವುದು. ಸುದ್ದಿಗಳನ್ನು, ಸಂಗತಿಗಳನ್ನು ವಿಮರ್ಶೆಗೆ ಒಳಪಡಿಸುವುದು, ವಿಚಾರ ಮಂಥನ ಮಾಡುವುದು ಮತ್ತು ಮುಕ್ತ ಚರ್ಚೆಗಳನ್ನು ಮಾಡಿ ತಿಳುವಳಿಕೆಯನ್ನು ವೃದ್ಧಿಸಿಕೊಂಡು itkannidiga.com ಜೀವನಕ್ಕೆ ಮುನ್ನುಡಿ ಬರೆಯುವುದು.
೪. ಕನ್ನಡ ಚಿತ್ರಗಳನ್ನ ವೀಕ್ಷಿಸಿ ‘ಸ್ಯಾಂಡಲ್ ವುಡ್’ನ ಪ್ರೋತ್ಸಾಹಿಸಿ. ಮೋಲತಹ software engineer ಆಗಿದ್ದ ಮಿತ್ರ ಯೋಗೇಶ್ ನಾರಾಯಣ್ ‘ಮೊದಲಾ ಸಲ’ ಎಂಬ ಚಿತ್ರ ನಿರ್ಮಿಸಿದ್ದಾನೆ. ಶೀಘ್ರದಲ್ಲೇ ಚಿತ್ರ ಬಿಡುಗಡೆಯಾಗಲಿದ್ದು, ನಿಮ್ಮ ಸಹಕಾರವಿರಲಿ.
೫. Un-official communicationಗೆ ಕನ್ನಡವನ್ನೇ ಬಳಸಿ
೬. ನಮ್ಮ ನಿಮ್ಮೆಲ್ಲರ ವಾಹನಗಳ ನಂಬರ್ ಪ್ಲೇಟ್ ಗೆ englishನ ಜತೆಗೆ ಕನ್ನಡವನ್ನೂ ಬಳಸೋಣ.

ಒಟ್ಟಾರೆ ಹೇಳಬೇಕೆಂದರೆ, ಕನ್ನಡದ ಬಗ್ಗೆ ಕಾಳಜಿ ಇಲ್ಲವೆಂಬ ಅಪವಾದ ಹೊತ್ತಿರುವ ಐಟಿ ಪ್ರಪಂಚದಲ್ಲಿ, ಕನ್ನಡದ ಕಾರಂಜಿಯನ್ನು ಮನಮೋಹಕವಾಗಿ ಚಿಮ್ಮಿಸುವಲ್ಲಿ ನಿಮ್ಮ ಸಹಕಾರದ ಅವಶ್ಯಕತೆ ಇದೆ.
www.itkannadiga.com ನಲ್ಲಿ ತಮ್ಮ ಸುದ್ಧಿ , ಕಾರ್ಯಕ್ರಮಗಳ ವಿವರ ಅಥವಾ ಲೇಖನಗಳ ಪ್ರಕಟಣೆಗಾಗಿ raghavendra.kamalakar@yahoo.comಗೆ ಮೇಲ್ ಮಾಡಿರಿ. ಆದಷ್ಟು ಶೀಘ್ರ ನಾವು ಅದನ್ನು www.itkannadiga.com ನಲ್ಲಿ ಪ್ರಕಟಿಸುತ್ತೇವೆ.

ನಿಮ್ಮಲ್ಲೊಬ್ಬ ಕನ್ನಡಿಗ,
ರಾಘವೇಂದ್ರ ಕಮಲಾಕರ್ ಶೇಟ್

ಸಂಪಾದಕ – www.itkannadiga.com
ಮಿಂಚೆ: raghavendra.kamalakar@yahoo.com